ಮಕ್ಕಳ ಬಾಯಿಗೆ ರುಚಿರುಚಿ ಅಡುಗೆ

ಎಂ.ಅಹಲ್ಯಾ | June 3, 2014

Print Friendly

ಡ್ರೆ çಫ‌ೂÅಟ್‌ ಬಾಲ್‌

ADUGE-ballಬೇಕಾಗುವ ಸಾಮಗ್ರಿಗಳು: ಬೀಜ ಬೇರ್ಪಡಿಸಿದ ಮೃದುವಾದ ಖರ್ಜೂರದ ಚೂರುಗಳು 1 ಕಪ್‌, ಮಾರಿ ಬಿಸ್ಕತ್‌ 2, ಸಕ್ಕರೆ ಪುಡಿ 1 ಚಿ.ಚ. ಜೇನುತುಪ್ಪಹಾಗೂ ತುಪ್ಪ 1 ಚಿ.ಚ.

ವಿಧಾನ: .ಬಾಣಲೆಗೆ ತುಪ್ಪಹಾಕಿ ಬಿಸಿಮಾಡಿ. ಸಿದ್ಧಪಡಿಸಿರುವ ಖರ್ಜೂರವನ್ನು ಹಾಕಿ. ಮಾರಿ ಬಿಸ್ಕತ್‌ನ್ನು ಪುಡಿ ಮಾಡಿ ಸೇರಿಸಿ.

.ಬಳಿಕ ಸಕ್ಕರೆ, ಜೇನುತುಪ್ಪಎಲ್ಲವನ್ನು ತುಪ್ಪಕ್ಕೆ ಸೇರಿಸಿ ಚೆನ್ನಾಗಿ ಬೆರೆಸಿ, ಉಂಡೆ ಮಾಡಿ ಸವಿಯಲು ಕೊಡಿ.

*ಖರ್ಜೂರದಲ್ಲಿರುವ ಕಬ್ಬಿಣಾಂಶ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಮತ್ತು ನಾರಿನಂಶ ಮಕ್ಕಳ ಬೆಳವಣಿಗೆಗೆ ಅತ್ಯುತ್ತಮ ಪೋಷಕಾಂಶಗಳು.

ಕಾಯಿತುರಿ ಲಡ್ಡು

ADUGE-ladduಬೇಕಾಗುವ ಸಾಮಗ್ರಿಗಳು: ಹಾಲು ½ ಲೀಟರ್‌, ಸಕ್ಕರೆ ¾ ಕಪ್‌, ಕಾಯಿತುರಿ 1½ ಕಪ್‌, ಪಿಸ್ತಾ, ಗೋಡಂಬಿ ಹಾಗೂ ಬಾದಾಮಿ ಸೇರಿ ಭಿ ಕಪ್‌.

ವಿಧಾನ: .ಹಾಲನ್ನು ದಪ್ಪತಳದ ಪಾತ್ರೆಯಲ್ಲಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕುದಿಸಿ, ಅರ್ಧಕ್ಕೆ ಇಳಿಸಿ.
.ಬಳಿಕ ಸಕ್ಕರೆ ಮತ್ತು ಕಾಯಿತುರಿಯನ್ನು ಸೇರಿಸಿ ಸ್ವಲ್ಪ$ಹೊತ್ತು ಕೆದಕಿ, ಪಿಸ್ತಾ, ಗೋಡಂಬಿ ಹಾಗೂ ಬಾದಾಮಿ ಚೂರುಗಳನ್ನು ಮಿಶ್ರಣಕ್ಕೆ ಸೇರಿಸಿ.

.ಸ್ವಲ್ಪ ತಣ್ಣಗಾದ ಅನಂತರ ಉಂಡೆ ಕಟ್ಟಿದರೆ ರುಚಿಯಾದ ಲಡ್ಡು ರೆಡಿ.

*ಕಾಯಿತುರಿ ಕ್ಷಯರೋಗವನ್ನು ಶಾಂತಗೊಳಿಸುತ್ತದೆ ಮತ್ತು ಹೊಟ್ಟೆಯ ಹುಣ್ಣು ಮಾಯುವಂತೆ ಮಾಡುತ್ತದೆ.

ಫ‌ೂÅಟ್‌ ಪಸಂದ್‌

ADUGE-pasandಬೇಕಾಗುವ ಸಾಮಗ್ರಿಗಳು: ಕಿತ್ತಳೆ ಅಥವಾ ಮೂಸಂಬಿ, ಬಾಳೆಹಣ್ಣು, ಸೇಬು, ದಾಳಿಂಬೆ ಮೊದಲಾದ ಹಣ್ಣಿನ ಚೂರುಗಳು 3 ಕಪ್‌, ಸಕ್ಕರೆ ಭಿ ಕಪ್‌, ದ್ರಾಕ್ಷಿ, ಗೋಡಂಬಿ ಪಿಸ್ತಾ ಮೊದಲಾದ ಒಣಹಣ್ಣಿನ ಚೂರುಗಳು ಭಿ ಕಪ್‌, ಏಲಕ್ಕಿ ಪುಡಿ ಚಿಟಿಕೆ ಹಾಗೂ ಜೇನುತುಪ್ಪರುಚಿಗೆ ತಕ್ಕಷ್ಟು.

ವಿಧಾನ : .ಎಲ್ಲ ಸಾಮಗ್ರಿಗಳನ್ನು ಒಟ್ಟಿಗೆ ಬೆರೆಸಿಕೊಂಡರೆ ಫ‌ೂÅಟ್‌ ಪಸಂದ್‌ ಸವಿಯಲು ಸಿದ್ಧ.
.ಹಾಗೆಯೇ ತಿನ್ನಬಹುದು. ಬೇಕಾದರೆ ಐಸ್‌ಕ್ರೀಮ್‌ನೊಂದಿಗೆ ಬೆರೆಸಿ, ಒಂದು ಗಂಟೆ ಫ್ರೀಜರ್‌ನಲ್ಲಿಟ್ಟು ಬಳಿಕ ಸವಿಯಲು ಕೊಡಬಹುದು.

ಅಕ್ಕಿ ವಡೆ

ADUGE-vadeಬೇಕಾಗುವ ಸಾಮಗ್ರಿಗಳು: ಅಕ್ಕಿಹಿಟ್ಟು 1 ಕಪ್‌, ಕರಿಯಲು ಎಣ್ಣೆ, ಉಪ್ಪು ರುಚಿಗೆ.

ವಿಧಾನ : .ಅಕ್ಕಿಹಿಟ್ಟಿಗೆ ಉಪ್ಪು ಸೇರಿಸಿ ಹದ ಬಿಸಿನೀರು ಹಾಕಿ ಗಟ್ಟಿಯಾಗಿ ಕಲಸಿ, ಮೃದುವಾಗಿ ನಾದಿಕೊಳ್ಳಿ, 10 ನಿಮಿಷ ಬಿಡಿ.

.ಬಳಿಕ ಪ್ಲಾಸ್ಟಿಕ್‌ ಪೇಪರ್‌ಗೆ ಎಣ್ಣೆ ಸವರಿ ಸಾಧ್ಯವಾದಷ್ಟು$ತೆಳ್ಳಗೆ ತಟ್ಟಿ. ಕಾದ ಎಣ್ಣೆಯಲ್ಲಿ ಎರಡೂ ಬದಿ ಸ್ವಲ್ಪ ಕೆಂಪು ಬಣ್ಣ ಬರುವ ಹಾಗೆ ಕರಿಯಿರಿ.

.ಗರಿಗರಿಯಾಗಿರುವಾಗಲೇ ಕಾಯಿಚಟ್ನಿಯೊಂದಿಗೆ ಸವಿಯಲು ಕೊಡಿ.

*ಕುರುಕಲು ತಿನ್ನಲು ಆಸೆ ಪಡುವ ಮಕ್ಕಳಿಗೆ ಸೂಕ್ತವಾದ ತಿಂಡಿಯಿದು. ಅಕ್ಕಿಯಿಂದ ತಯಾರಿಸಿದ ಆಹಾರ ಬೇಗನೆ ಜೀರ್ಣವಾಗುತ್ತದೆ.

ಗೋಧಿಹಿಟ್ಟಿನ ಕಟ್ಲೆಟ್‌

ADUGE-catletಬೇಕಾಗುವ ಸಾಮಗ್ರಿಗಳು: ಗೋಧಿಹಿಟ್ಟು 1 ಕಪ್‌, ಆಲೂಗಡ್ಡೆ, ಬಟಾಣಿ ಹಾಗೂ ಕ್ಯಾರೆಟ್‌ ಮೊದಲಾದವುಗಳ ಚೂರುಗಳು ¾ ಕಪ್‌, ಗರಂಮಸಾಲೆ ಪೌಡರ್‌ ಭಿ ಚಮಚ ಕೆಂಪುಮೆಣಸಿನಪುಡಿ
1 ಚಮಚ, ಬ್ರೆಡ್ಡಿನ ಪುಡಿ ಅಥವಾ ರಸ್ಕ್ ಪುಡಿ ½ ಕಪ್‌, ಉಪ್ಪು ರುಚಿಗೆ.

ವಿಧಾನ : .ಗೋಧಿಹಿಟ್ಟಿಗೆ ಉಪ್ಪು ಮತ್ತು ಸ್ವಲ್ಪ$ಎಣ್ಣೆಯನ್ನು ಸೇರಿಸಿ ನೀರಿನಲ್ಲಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ನಾದಿಕೊಳ್ಳಿ.

.ತರಕಾರಿಗಳನ್ನು ಬೇಯಿಸಿ. ತಣಿದ ಅನಂತರ ಸ್ವಲ್ಪ$ಹಿಸುಕಿ, ಮಸಾಲೆ ಪುಡಿ, ಉಪ್ಪು ಹಾಗೂ ಕೆಂಪುಮೆಣಸಿನಪುಡಿಯನ್ನು ಸೇರಿಸಿ ಬೆರೆಸಿ. ಇದು ಹೂರಣ.

.ಹಿಟ್ಟನ್ನು ಒಬ್ಬಟ್ಟಿನ ಕಣಕದ ಹಾಗೆ ತೆಗೆದುಕೊಂಡು ತಯಾರಾದ ಹೂರಣವನ್ನು ತುಂಬಿಸಿ, ತಟ್ಟಿ. ಬ್ರೆಡ್ಡಿನ ಪುಡಿಯಲ್ಲಿ ಎರಡೂ ಕಡೆ ಹೊರಳಿಸಿ. ಕಾದ ಕಾವಲಿ ಮೇಲೆ ಹಾಕಿ. ಎಣ್ಣೆ ಹಾಕಿ, ಎರಡೂ ಬದಿ ಸ್ವಲ್ಪ$ಕೆಂಪು ಬಣ್ಣ ಬರುವ ಹಾಗೆ ಹುರಿಯಿರಿ.

.ಟೊಮೆಟೊ ಸಾಸ್‌ನೊಂದಿಗೆ ಸವಿಯಲು ಕೊಡಿ.

*ಗೋಧಿಹಿಟ್ಟು ಮತ್ತು ತರಕಾರಿಗಳಲ್ಲಿ ಹೆಚ್ಚು ಪೌಷ್ಟಿಕಾಂಶಗಳು ಇರುವುದರಿಂದ ಮಕ್ಕಳಿಗೆ ಪುಷ್ಟಿದಾಯಕ ಆಹಾರವಿದು.

Leave a Reply

Your email address will not be published. Required fields are marked *

ನೀವು ನೋಡುತ್ತಿರುವುದು ಉಚಿತ ಪ್ರತಿ, ತರಂಗದ ಪೂರ್ಣಪ್ರತಿಯನ್ನು ಫ್ಲಿಪ್ ಬುಕ್ ರೂಪದಲ್ಲಿ ಪಡೆಯಲು ಚಂದಾದಾರರಾಗಿ.

Powered By Indic IME