ಅಧ್ಯಾಯ - ಒಂದು

ಬೇಡದಿರು ಕಾಡದಿರು

ಸಿಕ್ಕಿತು ಮೆಡಿಕಲ್‌ ಸೀಟು!

ಗೀತಾ ಬಿ. ಯು. | June 3, 2014

Print Friendly

beda-in“”ಮಂಡ್ಯ ಮೆಡಿಕಲ್‌ ಕಾಲೇಜಿನಲ್ಲಿ ಸೀಟು ಸಿಕ್ಕಿದೆ. ಸೀಟು ಸಿಕ್ಕಿತು ಅಂತ ಸಂತೋಷ ಪಡೋ ಹಾಗಿಲ್ಲ. ಪ್ರೈವೇಟ್‌ ಕಾಲೇಜಾದ್ರೂ ಪರ್ವಾಗಿಲ್ಲ ಅಂತ ಅಂದೊRಂಡಿದ್ರೆ ಬೆಂಗಳೂರಿನಲ್ಲೇ ಸಿಗುತ್ತೇನೋ… ಆದ್ರೆ…”

“”ಅಮ್ಮ ಪ್ಲೀಸ್‌… ಸೀಟ್‌ ಸಿಕ್ಕಿದ್ದಕ್ಕೆ ಸಂತೋಷ ಪಡು ಅಷ್ಟೇ. ವಿ ಕಾನ್‌r ಅಫೋರ್ಡ್‌ ಪ್ರೈವೇಟ್‌ ಕಾಲೇಜ್‌! ಫೀಸ್‌ ಎಷ್ಟು ಗೊತ್ತಾ…? ಒಂದಲ್ಲ ಐದು ವರ್ಷ ಕಟ್ಟಬೇಕು… ವರ್ಷಕ್ಕೆ ಒಂದೂವರೆ ಲಕ್ಷಕ್ಕೂ ಹೆಚ್ಚು! ಮೆರಿಟ್‌ ಸೀಟ್‌ ಅಂದ್ರೂ ಅಷ್ಟೇ… ನಾನು ಮಂಡ್ಯ ಕಾಲೇಜಿಗೆ ಸೇರೊRàತೀನಿ… ಹೆಚ್ಚಿನ ಬರ್ಡನ್‌ ಆಗೋಕ್ಕೆ ಇಷ್ಟ ಇಲ್ಲ ನಂಗೆ…” ಅಮ್ಮನ ದನಿಗಿಂತ ಗಟ್ಟಿಯಾದ ದನಿಯಲ್ಲಿ ಹೇಳಿದೆ.

ಎದುರಿಗೆ ಕೂತ ರಮೇಶ್‌ ಮಾಮ ನನ್ನನ್ನೊಮ್ಮೆ ಅಮ್ಮನನ್ನೊಮ್ಮೆ ನೋಡಿ ನಸುನಕ್ಕ.

“”ಕಂಗ್ರಾಟ್ಸ್‌ ಪುಟ್ಟಿ! ಬರೀ ಬಾಯಲ್ಲಿ ಸೀಟ್‌ ಸಿಕ್ಕಿದೆ ಅಂತ ಹೇಳ್ತಾ ಇದ್ಯಲ್ಲ… ಸ್ವೀಟ್‌ ಮಾಡ್ಲಿಲ್ವಾ? ಸೋಮಾರಿ ಅಕ್ಕ ನೀನು…”

“”ಬೆಂಗಳೂರಾದ್ರೆ ಮನೇಲಿ ಇದೊYಂಡು ಓದಬಹುದು. ಮಂಡ್ಯ ಅಂದ್ರೆ ತಿರುಗಿ ಹಾಸ್ಟೆಲ್‌, ಮೆಸ್ಸು ಅಂತೆಲ್ಲಾ ಖರ್ಚು… ಜತೆಗೆ…”

“”ಅಮ್ಮ… ಹಾಸ್ಟೆಲ್‌ ಯಾಕೆ? ನಾನು ಅಪ್ಪನ ಜತೆ ಇರಿ¤àನಿ. ಬನ್ನೂರು ಎಂಟೋ – ಹತ್ತೋ ಕಿಲೋಮೀಟರ್‌ ದೂರ ಅಷ್ಟೇ ಅಲ್ಲವೇ? ಒಂದು ಟೂ ವ್ಹೀಲರ್‌ ತೊಗೊಂಡ್ರೆ ನಾನೇ ಓಡಿಸ್ಕೊಂಡು ಹೋಗಿ ಬರಬಹುದು… ಇಲೆª ಹೋದ್ರೆ ಬೇಕಾದಷ್ಟು ಬಸ್ಸುಗಳಿರುತೆÌ… ಇಟ್‌ ಈಸ್‌ ನೋ ಪ್ರಾಬ್ಲಿಮ್‌…” ನನ್ನ ಮಾತು ಮುಗಿಸುವ ವೇಳೆಗೆ ಕೂತಲ್ಲಿಂದ ಮೇಲೆದ್ದಳು ಅಮ್ಮ. ಅವಳ ಮುಖ ಕೆಂಪೇರಿತು.

“”ನೀನು ಅಲ್ಲಿಗೆ ಹೋಗ್ತಾ ಇಲ್ಲ…” ಅವಳ ದನಿ ನಡುಗಿತು.

ರಮೇಶ ಮಾಮ ಮೇಲೆದ್ದ.

“”ನಡಿ ಸ್ನೇಹಾ… ನಾನು ನಿಂಗೆ ಐಸ್‌ಕ್ರೀಮ್‌ ಕೊಡಿಸ್ತೀನಿ. ಮೆರಿಟ್‌ನಲ್ಲಿ ಮೆಡಿಕಲ್‌ ಕಾಲೇಜಿನಲ್ಲಿ ಅದೂ ಸರಕಾರಿ ಮೆಡಿಕಲ್‌ ಕಾಲೇಜಿನಲ್ಲಿ ಸೀಟ್‌ ಸಿಕ್ಕೋದು ಕಡಿಮೆ ಅಚೀವ್‌ಮೆಂಟಾ? ಇಟ್‌ ಈಸ್‌ ರಿಯಲಿ ಗ್ರೇಟ್‌! ಅಕ್ಕ ಟೆನ್ಶನ್‌ ಮಾಡ್ಕೊàಬೇಡ. ನೀನೂ ಬರಾö? ಐಸ್‌ಕ್ರೀಮ್‌ಗೆ?”

“”ರಮೇಶಾ! ಪರಿಸ್ಥಿತಿಯ ಸೀರಿಯಸ್‌ನೆಸ್‌ ನಿಂಗೆ ಅರ್ಥವೇ ಆಗ್ತಾ ಇಲ್ವಲ್ಲಾ? ಇವತ್ತು ಕೌನ್ಸೆಲಿಂಗ್‌ಗೆ ಸುರೇಶಣ್ಣನ ಜತೆಗೆ ಇವಳನ್ನು ಕಳಿಸಿ ತಪ್ಪು ಮಾಡಿದೆ. ನಾನೇ ಹೋಗಬೇಕಿತ್ತು. ಅವನಿಗೂ ಬುದ್ಧಿ ಇಲ್ಲ. ಇಬ್ರೂ ಹೋಗಿ ಮಂಡ್ಯ ಕಾಲೇಜಿನ ಸೀಟೆY ಡಿ.ಡಿ. ಕಟ್ಟಿ ಬಂದಿದ್ದಾರೆ” ಅಮ್ಮ ಶುರು ಮಾಡಿದಾಗ ನಂಗೆ ರೇಗಿತು.

“”ಮತ್ತೆ…? ಬೆಂಗಳೂರು, ಮೈಸೂರು ಸರಕಾರಿ ಕಾಲೇಜಿನಲ್ಲಿ ಸೀಟ್‌ ಇರಲಿಲ್ಲ. ಹುಬ್ಬಳ್ಳಿಯಲ್ಲಿ ಇತ್ತು, ಮಂಡ್ಯ ಇತ್ತು. ಹುಬ್ಬಳ್ಳಿಗಿಂತ ಮಂಡ್ಯ ಹತ್ತಿರ ಅಂತ‌ ಅಲ್ಲಿ ಅಡ್ಮಿಷನ್‌ ತೊಗೊಂಡೆ. ಮ್ಯಾನೇಜ್‌ಮೆಂಟ್‌ ಕೋಟಾದಲ್ಲಿ ಬೆಂಗಳೂರಿನಲ್ಲಿ ಪ್ರೈವೇಟ್‌ ಕಾಲೇಜಿನಲ್ಲಿ ಅರುವತ್ತು ಲಕ್ಷವೋ ಎಂಬತ್ತು ಲಕ್ಷವೋ ಕೊಟ್ಟು ಸೇರಿಸು. ಹೋಗ್ತಿàನಿ. ನಿಂಗೆ ಅದು ಆಗೋಲ್ಲ. ನನ್ನ ಯೋಗ್ಯತೆಗೆ ತಕ್ಕ ಸೀಟ್‌ ಸಿಕ್ಕಿದೆ. ಐ ಆ್ಯಮ್‌ ಹ್ಯಾಪಿ. ವರ್ಷಕ್ಕೆ ಇಪ್ಪತ್ತು ಸಾವಿರ ಅಷ್ಟೇ ಫೀಸು! ಯಾರಿಗೂ ಬರ್ಡನ್‌ ಆಗೋಲ್ಲ. ನನ್ನ ಸಂತೋಷ ದಲ್ಲಿ ಪಾಲ್ಗೊಳ್ಳಲು ಏನು ಕಷ್ಟ ನಿಂಗೆ? ಎಲ್ಲಾ ನಿನ್ನ ಮೂಗಿನ ನೇರಕ್ಕೇ ಇರಬೇಕು ಅಂದ್ರೆ ಹೇಗೆ?”

“”ಅಲ್ಲ ಸ್ನೇಹಾ… ನನ್ನ ಮಾತೇ ಅರ್ಥ ಆಗ್ತಿಲ್ಲ ನಿಂಗೆ… ಎಲ್ಲಾ ಬಿಟ್ಟು ಮಂಡ್ಯ? ಅದೂ ಆ ರಂಗನಾಥನ ಬಳಿ? ನಂಗೆ ಇಷ್ಟ ಇಲ್ಲ…”

“”ಆ ರಂಗನಾಥ ನನ್ನ ಅಪ್ಪ! ನಿನ್ನ – ಅಪ್ಪನ ಮಧ್ಯದ ಪ್ರಾಬ್ಲಿಮ್‌ನಲ್ಲಿ ನನ್ನ ಎಳೆದು ತರಬೇಡ. ಹಾಗೆ ನೋಡಿದ್ರೆ ನಿಮ್ಮಿಬ್ಬರ ಜಗಳದಿಂದ ನಂಗೆ ಒಂದು ನಾರ್ಮಲ್‌ ಮನೆ ಸಿಗದೇಹೋಯ್ತು.”

“”ಏನು? ಏನು ಕಷ್ಟ ಆಗಿದ್ದು ನಿಂಗೆ? ತಂದೆ – ತಾಯಿ ಎರಡೂ ಆಗಿ ನಿನ್ನ ಸಾಕಿದ್ದೇನೆ. ನಿನ್ನ ಬಿಟ್ರೆ ಬೇರೇನೂ ಇಲ್ಲ ನನ್ನ ಜೀವನದಲ್ಲಿ ಅನ್ನೋ ರೀತಿ ಸಾಕಿದ್ದೇನೆ” ಅಮ್ಮನ ದನಿ ಕೋಪ, ದುಃಖದಿಂದ ಕೀರಲಾಯಿತು.
“”ಅಕ್ಕ ಪ್ಲೀಸ್‌…” ರಮೇಶ್‌ ಮಾಮ ತಮ್ಮ ಅಕ್ಕನ ಬಳಿ ಸಾಗಿದರು.

“”ಅವಳು ಮಾತಾಡೋದು ನೋಡು… ಹೇಗೆ ಮಾತಾಡ್ತಾಳೆ. ಆ ಬನ್ನೂರಿನಲ್ಲೇ ನಾನು ಕೊಳೀತಾ ಕೂತಿದ್ರೆ ಇವ್ಳು ಇಷ್ಟು ಓದಿ ಮುಂದೆ ಬರೋಕ್ಕೆ ಆಗ್ತಾ ಇತ್ತಾ?” ಚೂಡಿಯ ದುಪ್ಪಟದಿಂದ ಕಣ್ಣೊರೆಸಿಕೊಂಡಳು ಅಮ್ಮ.
“”ಅಮ್ಮ ಪ್ಲೀಸ್‌…! ನೀನು ಅಪ್ಪನ್ನ ಬಿಟ್ಟಿದ್ದು ನನಗೆ ಒಳ್ಳೆಯ ಭವಿಷ್ಯ ನೀಡಲು ಅನ್ನೋ ಪೋಸ್‌ ಕೊಡಬೇಡ. ನಿಂಗೆ ಅಲ್ಲಿ ಇರಲು ಇಷ್ಟ ಇರಲಿಲ್ಲ. ಅಜ್ಜಿ , ತಾತಾ ಜತೆಗೆ ಹಳ್ಳಿ ಮನೆಯಲ್ಲಿ ಇರುವುದು ನಿಂಗೆ ಬೇಡವಾಗಿತ್ತು. ಅಪ್ಪ ಬೆಂಗಳೂರಿಗೆ ಬರಲು ಒಪ್ಪಲಿಲ್ಲ. ನಂಗೆ ಎರಡು ವರ್ಷವಾಗುವ ಹೊತ್ತಿ¤ಗೆ ನೀನು ಅಪ್ಪನ್ನ, ಅವನ ಮನೇನ, ಅವನ ಹಳ್ಳಿàನ ಬಿಟ್ಟು ಬೆಂಗಳೂರಿಗೆ ಬಂದಿ… ನಿನಗಾಗಿ ಬಂದೆ ಅಲ್ಲವೇ… ಇಲ್ಲಿ ಕೆಲಸಕ್ಕೆ ಸೇರಿ… ನಿನ್ನ…” ನಾನೂ ದನಿಯೇರಿಸಿದೆ.

“”ಪುಟ್ಟಿ…” ಮಾವ ವಾತಾವರಣ ತಿಳಿ ಮಾಡಲು ಪ್ರಯತ್ನಿಸಿದ. “”ಐಸ್‌ಕ್ರೀಮ್‌ ಶಾಪ್‌ ಕ್ಲೋಸ್‌ ಆಗಿºಡುತ್ತೆ… ಹೋಗೋಣ… ಅಕ್ಕ ನೀನು ಬಾ…”

“”ನನ್ನ ತಲೆ ಕೆಟ್ಟು ಸಿಡೀತಾ ಇದೆ… ನೀನು” ಮಾತು ಪೂರ್ತಿ ಮಾಡದೆ ಅಮ್ಮ ಎದ್ದು ಒಳಗೆ ಹೋದಳು.
ನಾನು ಸುಮ್ಮನೆ ಕುಳಿತೆ. ಮಾವ ಪಕ್ಕ ಬಂದು ಕುಳಿತ.

“”ಮಾವ… ನಾನು ಅಪ್ಪನ ಜತೆ ಹೋಗಿರೋದು ತಪ್ಪಾ…?”

“”ನಿಮ್ಮಪ್ಪನ ಮನೆ ಅಂದ್ರೆ ನಿನ್ನ ಮನೆ. ನೀನು ಹೋಗಿರೋದು ತಪೆØàಗೆ ಆಗುತ್ತೆ? ಹೋಗು… ಅವರಿಗೆ ಹೇಳಿದ್ಯ…?”

ಅಮ್ಮನ ತಮ್ಮನೇ ಇವರು…? ಅವರತ್ತ ಕಣ್ಣರಳಿಸಿದೆ.

“”ಇಲ್ಲ…! ಅಪ್ಲೆ„ ಮಾಡಿದಾಗ, ಸೀಟ್‌ ಪ್ರಿಫ‌ರೆನ್ಸ್‌ನಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ ಆದ ಮೇಲೆ ಮಂಡ್ಯ ಹಾಕಿದ್ದೇನೆ ಅಂತ ಹೇಳಿದ್ದೆ… ಅಪ್ಪ ನಕ್ಕಿದ್ರು… ನಿಂಗೆ ಬೇಕಾದ್ದು ಸಿಗಲಮ್ಮ ಅಂದಿದ್ರು…”

“”ಬಂದಿದ್ರಾ?”

“”ಇಲ್ಲ… ಫೋನಲ್ಲಿ ಹೇಳಿದ್ದು… ಅಪ್ಪ ಇಲ್ಲಿಗೆ ಬರಲ್ಲ ಮಾವ. ಎಲ್ಲಾ ಮಂಡ್ಯದಲ್ಲೇ ಸಿಗತ್ತಮ್ಮ… ಬೆಂಗಳೂರಿಗೆ ಯಾಕೆ ಬರ್ಲಿ ಅಂತಾರೆ… ತಿಂಗ್ಳು ತಿಂಗ್ಳು ಐದು ಸಾವಿರಕ್ಕೆ ಚೆಕ್‌ ಮಾತ್ರ ಸರಿಯಾಗಿ ಬರುತ್ತೆ. ಅಷ್ಟೇನಾ ಮಾವ, ಅಪ್ಪ ಅಂದ್ರೆ? ದುಡ್ಡು ಕೊಡುವ ಎ.ಟಿ.ಎಂ!? ಅಮ್ಮ ಊಟ, ತಿಂಡಿ ನೋಡ್ಕೊತಾಳೆ. ಅಪ್ಪ ಫೀಸು, ಬಟ್ಟೆಬರೆಗೆ ದುಡ್ಡು ಕಳಿಸ್ತಾರೆ. ಅವರಿಬ್ಬರೂ ಅವರ ಜವಾಬ್ದಾರೀನ ಶೇರ್‌ ಮಾಡಿಕೊಂಡು ಬಿಟ್ಟಿದ್ದಾರೆ… ನಾನು ಋಣ ತೀರಿಸೋದು ಹೇಗೆ ಮಾವ?”

“”ಛೇ…! ಋಣ ಅಂತೆಲ್ಲಾ ಯಾಕೆ ಮಾತಾಡಾö..? ಚೆನ್ನಾಗಿ ಓದಿ ದೊಡ್ಡ ಡಾಕ್ಟರಾದ್ರೆ ಅವರಿಬ್ಬರ ಋಣ ತೀರಿಸಿದಂತೆ… ಆಯ್ತಾ…” ನನ್ನ ಕೆನ್ನೆ ತಟ್ಟಿ ಮೇಲೆದ್ದರು ಮಾವ.

“”ಐಸ್‌ಕ್ರೀಮ್‌ ಬೇಡ್ವಾ…?” ಅಡ್ಡಡ್ಡಲಾಗಿ ತಲೆಯಾಡಿಸಿದೆ.

“”ಚಿಯರ್‌ ಅಪ್‌! ನನ್ನ ಜತೆ ಬೇಡ… ನಿನ್ನ ಫ್ರೆಂಡ್ಸ್‌ ಜತೆ ಐಸ್‌ಕ್ರೀಮೊYà, ಡಿನ್ನರಿಗೋ ಹೋಗು…”

“”ಮಾವ…! ಮನೆ ಅಂದ್ರೆ ಏನು?”

“”ಆnಂ… ಕಂ ಅಗೇನ್‌…” ಕಣ್ಣರಳಿಸಿದರು.

“”ಮನೆ ಅಂದ್ರೆ ಏನು ಅಂದೆ…”

“”ಇದೇ ಮನೆ. ನೀನು ಕೂತಿದ್ಯಲ್ಲ ಈ ನಾಲ್ಕು ಗೋಡೆಗಳ ನಡುವೆ… ಕೆಳಗೊಂದು ನೆಲ… ಮೇಲೊಂದು ಸೂರು…”
“”ಉಣಬಡಿಸಿ, ಪ್ರೀತಿ ತೋರಲು ಅಮ್ಮ, ಬೆಚ್ಚಗಿನ ಭಾವ ಉಂಟು ಮಾಡುವ ಅಪ್ಪ… ಮಮತೆಯ ಧಾರೆಯೆರೆಯಲು ಅಜ್ಜಿ, ಕಥೆಗಳನ್ನು ಹೇಳಲು ತಾತಾ… ಜಗಳವಾಡಲು ಒಡಹುಟ್ಟಿದವರು… ಎಲ್ಲಾ ಇರಬೇಕಲ್ಲವೇ ಈ ನಾಲ್ಕು ಗೋಡೆಗಳ ಆವರಣ ಮನೆಯಾಗಲು?” ನಿಧಾನವಾಗಿ ಹೇಳಿದೆ.

“”ಪುಟ್ಟಿà…” ನಿಂತ ಮಾವ ತಿರುಗಿ ಪಕ್ಕ ಕುಳಿತ. ನನ್ನ ಕೈಗಳನ್ನು ಅವನ ಕೈಲಿ ತೆಗೆದುಕೊಂಡ.

“”ತುಂಬಾ ಭಾವುಕಳಾಗ್ತಾ ಇದ್ಯ ಪುಟ್ಟಿ… ಅಕ್ಕ ಹೇಳ್ಳೋದನ್ನು ಅರ್ಥ ಮಾಡಿಕೋ. ಬೆಂಗಳೂರಿನಲ್ಲಿ ಬೆಳೆದ ನಿಂಗೆ ಅಲ್ಲಿ ಕಷ್ಟವಾಗುತ್ತೆ ಅಂತ ಅವಳು…”

“”ಮಾವ… ಪ್ಲೀಸ್‌ ಬೆರಳು ಚೀಪೋ ಮಗು ಅಂತ ಅಂದೊRಂಡಿದೀರಾ ನನ್ನ? ಅಮ್ಮ ಈಸ್‌ ಫೀಲಿಂಗ್‌ ಜೆಲಸ್‌! ಅವಳು ದೂರ ಮಾಡಿರುವ ಅಪ್ಪನ ಬಳಿ ನಾನು ಹೋಗ್ತಾ ಇದೀನಿ ಅನ್ನೋ ಜೆಲಸಿ, ಕೋಪ ನಂಗೆ ಮೆರಿಟ್‌ ಸೀಟ್‌ ಸಿಕ್ಕಿರುವ ಸಂತಸವನ್ನು ಮುಚ್ಚಿ ಹಾಕಿಬಿಟ್ಟಿದೆ. ಮೂಗಿನ ನೇರಕ್ಕೆ ಯೋಚಿಸೋದು ಅಂದ್ರೆ ಇದೇ ಅಲ್ವಾ? ದುಡ್ಡು ಕೊಡೋದು ಬಿಟ್ರೆ ಅಪ್ಪನಿಗೆ ಈ ಸಂಬಂಧಗಳಲ್ಲಿ ಉಳಿದಿದ್ದೇನು? ಅಮ್ಮ ವಿಚ್ಛೇದನೆ ಆದರೂ ಕೊಟ್ಟಿದ್ರೆ ಇನ್ನೊಂದು ಮದುವೆಯಾದ್ರೂ ಮಾಡಿಕೊಳ್ತಾ ಇದ್ರೇನೋ ಅಪ್ಪ. ಅಮ್ಮನಿಗೆ ನಾನಿದ್ದೆ… ಇನ್ನೊಂದು ಮದುವೆಯ ಯೋಚನೆ ಇರಲಿಲ್ಲ… ಅವಳು… ಅಪ್ಪನ ವಿಷಯ ಯೋಚಿಸಲೇ ಇಲ್ಲ… ಅಥವಾ ತಮಗಿಲ್ಲದ ಸುಖ ಅವನಿಗ್ಯಾಕೆ ಅಂದುಕೊಂಡಳೇನೋ… ಆದರೆ ಅಪ್ಪನಿಗೆ ಯಾರಿದ್ದರು? ಅಮ್ಮ ಬಿಟ್ಟು ಬಂದ ವರ್ಷಕ್ಕೆ ಅಜ್ಜಿ ಹೋಗಿºಟ್ರಾ…
ಇನ್ನೆರಡು ವರ್ಷಕ್ಕೆ ತಾತಾ… ಅಪ್ಪ ಒಂಟಿಯಾದ್ರು… ಆಗಲಾದರೂ ಅಮ್ಮ ಹೋಗಬಹುದಿತ್ತು… ಅಥವಾ
ಡೈವೋರ್ಸ್‌ ಮಾಡಬಹುದಿತ್ತು…”

“”ಹೌದು ಕಣೇ… ನಂಗೆ ಬುದ್ಧಿ ಹೇಳ್ಳೋಷ್ಟು ನಿನ್ನ ಬುದ್ಧಿ ಬಲಿತಿರಲಿಲ್ಲ ನೋಡು… ಅದಕ್ಕೆ ಹೋಗಲಿಲ್ಲ!” ಅಮ್ಮ ಕೋಣೆಯಿಂದ ಹೊರಬಂದಳು.

“”ನೋಡಿದ್ಯೆàನೋ! ಅದಕ್ಕೆ ರಕ್ತ ಅನ್ನೋದು! ಆ ಮನುಷ್ಯ ಸಾಲ ತೀರಿಸಿದ ಹಾಗೆ ದುಡ್ಡು ಕಳಿಸಿದ್ರೂ… ಅದ್ಹೇಗೆ ಪ್ರೀತಿ ಇದೆ ನೋಡು ಇವಳಿಗೆ! ಒಂದಿನ ಬರ್ಲಿಲ್ಲ. ಕರೀಲಿಲ್ಲ. ಕಳಿಸಲಿಲ್ಲ… ತೊಳೆದು, ಬಳಿದು, ನಿದ್ದೆಗೆಟ್ಟು ಬೆಳೆಸಿದ್ದು ನಾನು” ಅತ್ತ ಕುರುಹಾಗಿ ಕಂಗಳು ಕೆಂಪಾಗಿದ್ದವು. ಎದ್ದು ಅವಳ ಬಳಿ ಸಾಗಿದೆ. ನನ್ನಿಂದ ದೂರ ಸರಿದಳು ಅಮ್ಮ. ಕೈ ಹಿಸುಕಿಕೊಂಡು ನಿಂತೆ ನಾನು.

“”ಮೊದಲಿಂದಲೂ ಹೀಗೇ ಮಾಡ್ತಾ ಬಂದಿದ್ಯ ನೀನು… ಅಪ್ಪ ಅಥವಾ ಅಮ್ಮ…! ಇಬ್ಬರಲ್ಲಿ ಒಬ್ಬರನ್ನು ಆರಿಸು ಅಂತ! ಅಪ್ಪ, ಅಮ್ಮ ಇಬ್ಬರೂ ಬೇಕು ನಂಗೆ ಅಂತ ಯಾಕೆ ಅರ್ಥ ಮಾಡಿಕೊಳ್ಳಲ್ಲ ನೀನು? ನಿನ್ನ ಜತೆಯೇ ಇರಿ¤ದ್ದೆ. ಅಪ್ಪ ನೋಡಲು ಬಂದರೆ ಅವರ ಬಳಿ ಸಂತಸದಿಂದ ಹೋದರೆ ನಿಂಗೆ ಇಷ್ಟವಾಗ್ತ ಇರಲಿಲ್ಲ. ನೀನು ಜತೆಯಲ್ಲೇ ಇದ್ದವಳು… ಅಪ್ಪ ಅಪರೂಪಕ್ಕೆ ಬರುವ ಅತಿಥಿಯಾಗಿದ್ದರು ನನ್ನ ಪಾಲಿಗೆ! ಹಾಗಾಗಿ ಅವರ ಬಳಿಗೆ ಕಣ್ಣರಳಿಸಿ ಹೋಗುತ್ತಿದ್ದೆ. ನಿನಗೆ ಸೈರಣೆಯಿರಲಿಲ್ಲ. ಅಪ್ಪನ ಜತೆ ಜಗಳವಾಡುತ್ತಿದ್ದೆ. ಅವರು ಬಂದಾಗಲೆಲ್ಲಾ ಜಗಳ… ನನಗೆ ಅರ್ಥವಾಗುತ್ತಿರಲಿಲ್ಲ… ನಾನು ಚಿಕ್ಕವಳು… ಮನೆ ಬಿಟ್ಟು ಬೇರೆಡೆ ಭೇಟಿಯಾಗುವ ಅವಕಾಶವಿರಲಿಲ್ಲ. ಎರಡು ದಿನ ಕರೆದುಕೊಂಡು ಹೋಗ್ತಿàನಿ ಅಂತ ಅಪ್ಪ ಹೇಳಿದಾಗ… ನೀನು ಮಾಡಿದ ರಾದ್ಧಾಂತ ನೆನಪಿಲ್ಲವೇ ನಿಂಗೆ? ನಾನು ಎಂಟನೆಯ ಕ್ಲಾಸ್‌ನಲ್ಲಿದ್ದೆ. ನನಗೆ ನೆನಪಿದೆ. ನಿನ್ನ ನಾಲಗೆಗೆ ಹೆದರಿ ಅಪ್ಪ ಬರುವುದನ್ನೇ ಬಿಟ್ಟರು. ವಾರಕ್ಕೊಂದು ಕರೆಗೆ ನನ್ನ ಅವರ ಸಂಬಂಧವನ್ನು ಸೀಮಿತಗೊಳಿಸಿದೆ ಯಾಕಮ್ಮ? ಹತ್ತನೆಯ ಕ್ಲಾಸ್‌ನಲ್ಲಿ ತೊಂಬತ್ತಾರು ಪರ್ಸೆಂಟ್‌ ತೊಗೊಂಡು ಶಾಲೆಗೆ ಪ್ರಥಮಳಾಗಿದ್ದೆ. ನೀನು ಮೊಬೈಲ್‌ ಫೋನ್‌ ಕೊಡಿಸೆª. ಅಪ್ಪ ಅಜ್ಜಿಯ ಸರ ತಂದುಕೊಟ್ರಾ… ಓದೋ ಹುಡುಗೀಗೆ ಬಂಗಾರ ಯಾಕೆ ಅಂತ ಅವರನ್ನು ಹಂಗಿಸಿದೆ. ಯಾಕೆ? ಯಾಕೆ ಅವರು ಮಾಡೋದೆಲ್ಲಾ ತಪ್ಪಾಗಿ ಕಾಣುತ್ತೆ ನಿಂಗೆ? ಆ ಸರ ಬರೀ ಬಂಗಾರವಲ್ಲ… ಅಪ್ಪನ ತಾಯಿಯ ಆಶೀರ್ವಾದ, ಅವರ ಬಿಸುಪು ಅದರಲ್ಲಿದೆ. ನಂಗೆ ಬೇಕಿತ್ತು. ತಾಯಿಯದನ್ನು ಮಗಳಿಗೆ ಕೊಡುವಲ್ಲಿ ಅಪ್ಪ ಅನುಭವಿಸಬೇಕಾದ ಆನಂದಕ್ಕೆ ಕಲ್ಲು ಹಾಕಿ ನಿಂಗೆ ಸಿಕ್ಕಿದ್ದೇನು? ಯಾಕಮ್ಮ? ಯಾಕೆ ಇಷ್ಟೊಂದು ಇನ್‌ಸೆಕ್ಯುರಿಟಿ ನಿಂಗೆ?”
ಅಮ್ಮ ಕಲ್ಲುಬೊಂಬೆಯಂತೆ ನಿಂತೇ ಇದ್ದಳು.

“”ಈಗಲೂ ಅಷ್ಟೇ. ನಿನ್ನ ಜತೆ ಇದ್ದ ಮಾತ್ರಕ್ಕೆ ಅಪ್ಪನ ಮೇಲಿನ ಪ್ರೀತಿ ಹೇಗೆ ಕಡಿಮೆಯಾಗಲಿಲ್ಲವೋ… ಹಾಗೇ ನಾನು ಬನ್ನೂರಿಗೆ ಹೋಗಿ ಅಪ್ಪನ ಜತೆ ಇದ್ದರೆ ನಿನ್ನ ಮೇಲಿನ ಪ್ರೀತಿ ಕಡಿವೆ‌ುಯಾಗುವುದಿಲ್ಲ… ನಿಮ್ಮಿಬ್ಬರಿಗೂ ನಾನು ಹೇಗೆ ಬೇಕೋ… ಹಾಗೆ ನಂಗೆ ನೀವಿಬ್ಬರೂ ಬೇಕು… ಒಟ್ಟಿಗೆಯಾಗಿ ಅಲ್ಲದಿದ್ದರೆ… ಒಂಟಿಯಾಗಿಯಾದರೂ. ನೀನು ಕೋಪ ಮಾಡಿಕೊಂಡಷ್ಟು ಅಪ್ಪನ ಕಡೆಗೆ ಎಳೆಯುತ್ತದೆ ನನ್ನ ಜೀವ…” ನನ್ನ ದನಿ ಗದ್ಗದಿತವಾಯಿತು… ಆದರೂ ಅಮ್ಮನ ಮುಖ ಕಲ್ಲಾಗಿಯೇ ಉಳಿದಿತ್ತು.

“”ನಂಗೆ…” ನನ್ನ ಮಾತು ಮುಂದುವರಿಸಲಾಗದಂತೆ ಗಂಟಲುಬ್ಬಿ ಬಂದಿತ್ತು. ನನ್ನ ಮೊಬೈಲ್‌ ತನ್ನ ಆ್ಯಂಬುಲೆನ್ಸ್‌ ರಿಂಗ್‌ಟೋನ್‌ನಲ್ಲಿ ಹೊಡೆದುಕೊಳ್ಳಲಾರಂಭಿಸಿತು.

“”ಭವಿಷ್ಯದ ಡಾಕ್ಟರ್ರಿಗೆ ತಕ್ಕ ರಿಂಗ್‌ಟೋನ್‌! ನಿನ್ನ ಫ್ರೆಂಡ್‌ ಯಾರೋ ಇರಬೇಕು… ಮಾತಾಡು… ನಾನು ಹೊರಡ್ತೀನಿ. ಅಕ್ಕ ಬರಿ¤àನಿ… ಸುಮ್ನೆ ಆತಂಕ ಪಟ್ಕೊಂಡು, ಕೋಪ ಮಾಡಿಕೊಂಡು ಬಿ.ಪಿ. ತರಿಸ್ಕೋಬೇಡ. ಮಗಳು ಡಾಕ್ಟರಾಗಲು ಇನ್ನೂ ಐದು ವರ್ಷ ಬೇಕು… ಈಗಷ್ಟೇ ಸೀಟು ಸಿಕ್ಕಿದೆ…” ಕೈ ಬೀಸಿ ಹೊರನಡೆದ ರಮೇಶ್‌ ಮಾವ.

“”ನಿಮ್ಮಪ್ಪ ಇರಬೇಕು” ಅಮ್ಮ ಕೋಣೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡಳು.

ಅಪ್ಪನ್ನ ಬಿಟ್ಟು ಹದಿನೈದು ವರ್ಷದ ಮೇಲಾಗಿದ್ದರೂ ರಿಂಗಾದ ಫೋನ್‌ನ ಅತ್ತ ಕಡೆ ಇರುವುದು ಅಪ್ಪ ಎಂದು ಅವರ ಕರೆಯ ಸ್ವಭಾವ, ಸ್ವರೂಪ, ಸಮಯದ ಅರಿವು ಅವರ ಇರುವಿನ ಅರಿವಿಗಿಂತ ದಟ್ಟ ಅಮ್ಮನಿಗೆ.
“”ಹಲೋ ಅಪ್ಪ…! ನಂಗೆ ಮಂಡ್ಯ ಮೆಡಿಕಲ್‌ ಕಾಲೇಜಿನಲ್ಲಿ ಸೀಟ್‌ ಸಿಕು¤ ಅಪ್ಪ!” ಮೊಬೈಲ್‌ನ ಸ್ವಿಚ್‌ ಒತ್ತಿ ಸಂಭ್ರಮದಿಂದ ಹೇಳಲಾರಂಭಿಸಿದೆ.

(ಮುಂದಿನವಾರ)

Leave a Reply

Your email address will not be published. Required fields are marked *

ನೀವು ನೋಡುತ್ತಿರುವುದು ಉಚಿತ ಪ್ರತಿ, ತರಂಗದ ಪೂರ್ಣಪ್ರತಿಯನ್ನು ಫ್ಲಿಪ್ ಬುಕ್ ರೂಪದಲ್ಲಿ ಪಡೆಯಲು ಚಂದಾದಾರರಾಗಿ.

Powered By Indic IME