ಫ‌ಲಿತಾಂಶ ಕುರಿತ ತಳ್ಳಂಕ

ಫ‌ಲ್ಗುಣಿ | June 4, 2014

Print Friendly

ಎಪ್ರಿಲ್‌ 17ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕದ ಮೂರು ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ತಮ್ಮ ಗೆಲುವಿಗಾಗಿ ಎಲ್ಲ ಪ್ರಯತ್ನಗಳನ್ನು ನಡೆಸಿವೆ.

ಆಡಳಿತಾರೂಢ ಕಾಂಗ್ರೆಸ್‌ ಪಕ್ಷ ದೇಶದ ಉದ್ದಗಲ ತನ್ನ ಅಲೆ ಇಲ್ಲವಾದರೂ ಕರ್ನಾಟಕದಲ್ಲಿ ಗಣನೀಯ ಸಂಖ್ಯೆಯ ಸೀಟುಗಳನ್ನು ಗೆಲ್ಲಲೇಬೇಕಾದ ಅನಿವಾರ್ಯ ಸ್ಥಿತಿಯಲ್ಲಿದೆ.

ಇದು ಕಾಂಗ್ರೆಸ್‌ ಹೈಕಮಾಂಡ್‌ನ‌ ಆದೇಶವೂ ಹೌದು. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಹಿತದೃಷ್ಟಿಯಿಂದಲೂ ಮಹಣ್ತೀಪೂರ್ಣವಾದದ್ದು. ಯಾಕೆಂದರೆ, 13ರಿಂದ 14 ಸೀಟುಗಳನ್ನು ಗೆಲ್ಲದೆ ಹೋದರೆ ಸಿದ್ಧರಾಮಯ್ಯ ಅವರನ್ನು ಗದ್ದುಗೆಯಿಂದ ಅಲುಗಾಡಿಸಲು ಬಹಳ ಮಂದಿ ಕಾದು ನಿಂತಿರುವುದು ರಹಸ್ಯವೇನಲ್ಲ.

ಕಾಂಗ್ರೆಸ್‌ ಒಳಗುದಿ

ಅಂದ ಹಾಗೆ, ರಾಜ್ಯ ಕಾಂಗ್ರೆಸ್‌ನಲ್ಲೂ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟ ಹಲವರಿದ್ದಾರೆ. ದಲಿತರ ಕೋಟಾದಲ್ಲಿ ತಾವು ಯಾವತ್ತೋ ಮುಖ್ಯಮಂತ್ರಿ ಆಗಬೇಕಿತ್ತು ಎಂದು ಖರ್ಗೆ ಭಾವಿಸಿದ್ದಾರೆ. ಇಂಥ ಭಾವನೆ ಅವರಲ್ಲಿದೆ ಎಂಬ ಕಾರಣಕ್ಕಾಗಿಯೇ ಅವರಿಗೆ ರೈಲ್ವೇ ಖಾತೆಯನ್ನು ಕೊಟ್ಟು ಸಮಾಧಾನಿಸಲಾಗಿತ್ತು.

ಆದರೆ ಮುಂದಿನ ಲೋಕಸಭಾ ಚುನಾವಣೆಯ ಅನಂತರ ಏನು ಅನ್ನುವ ಪ್ರಶ್ನೆ ಕಾಂಗ್ರೆಸ್‌ ಹೈಕಮಾಂಡ್‌ನ‌ಲ್ಲಿ ಮಾತ್ರವಲ್ಲ. ಖರ್ಗೆ ಅವರಲ್ಲೂ ಇದೆ. ಗೆದ್ದು ಬರುವುದು ಬೇರೆ ವಿಷಯ. ಆದರೆ ದೆಹಲಿಯಲ್ಲಿ ಕೆಲಸವಿಲ್ಲದೆ ಕೂರುವುದು ಬಹಳ ಕಷ್ಟದ ಕೆಲಸ. ಯಾಕೆಂದರೆ, ಖರ್ಗೆ ತಮ್ಮ ರಾಜಕೀಯ ಬದುಕಿನುದ್ದಕ್ಕೂ ಜನರ ಮಧ್ಯೆ ಬೆಳೆದುಕೊಂಡು ಬಂದವರು.

ಇಂಥವರು ಅಧಿಕಾರ ಇಲ್ಲದೆ ಕೂರುವುದು ಹೇಗೆ? ಹೀಗಾಗಿ ಸಹಜವಾಗಿ ಅವರಿಗೆ ಕರ್ನಾಟಕದ ಮುಖ್ಯಮಂತ್ರಿ ಆಗಬೇಕು, ತಮಗಿರುವ ಕೋಟಾ ಪೂರ್ತಿಯಾಗುವಂತೆ ಮಾಡಬೇಕು ಎಂಬ ಆಕಾಂಕ್ಷೆ ಸಹಜ. ಸಿದ್ಧರಾಮಯ್ಯ 13, 14 ಸೀಟುಗಳನ್ನು ಗೆಲ್ಲಿಸಿಕೊಂಡು ಬರದಿದ್ದರೆ ತಮ್ಮನ್ನು ಮುಖ್ಯಮಂತ್ರಿ ಮಾಡಿ ಎಂದು ಅವರು ಹೇಳಬಹುದು.
ಅವರ ಪ್ರಕಾರವೇ, ಸಿದ್ಧರಾಮಯ್ಯ ಅವರ ಜಾಗವನ್ನು ಅಲುಗಾಡಿಸುವ ಯೋಚನೆ ಅವರಲ್ಲಿಲ್ಲ. ಆದರೆ ರಾಜ್ಯದಲ್ಲಿ ಯಾವುದಾದರೂ ಗುರುತರ ಜವಾಬ್ದಾರಿ ನೀಡಲು ಹೈಕಮಾಂಡ್‌ ಬಯಸಿದರೆ ಅದನ್ನು ನಿರಾಕರಿಸುವ ಸ್ಥಿತಿಯಲ್ಲಿ ಖರ್ಗೆ ಅವರಿಲ್ಲ.

ಹೀಗಾಗಿ ಸಿದ್ಧರಾಮಯ್ಯ ಅವರ ಜಾಗಕ್ಕೆ ಖರ್ಗೆ ಕೂಡ ಒಬ್ಬ ಪ್ರತಿಸ್ಪರ್ಧಿ. ಈ ಮಧ್ಯೆ ಉನ್ನತ ಶಿಕ್ಷಣ ಸಚಿವ ಆರ್‌.ವಿ. ದೇಶಪಾಂಡೆ ಕೂಡ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂಬುದು ರಹಸ್ಯವೇನಲ್ಲ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ಸಂದರ್ಭದಲ್ಲೇ ಅವರು ತಮ್ಮ ಮನದಿಂಗಿತವನ್ನು ತೋಡಿಕೊಂಡಿದ್ದರು. ಅವರೂ ರಾಜ್ಯ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದವರಲ್ಲವೇ? ಅಷ್ಟೇ ಅಲ್ಲ, ಜನತಾ ಪರಿವಾರದಲ್ಲಿದ್ದಾಗ ಹಲವು ಮಹಣ್ತೀದ ಸಚಿವ ಖಾತೆಗಳನ್ನು ನಿರ್ವಹಿಸಿದವರೂ ಹೌದು.

ಎಲ್ಲಕ್ಕಿಂತ ಮುಖ್ಯವಾಗಿ ಕಾಂಗ್ರೆಸ್‌ ಪಕ್ಷ ದೆಹಲಿಯಲ್ಲಿ ತೃತೀಯ ರಂಗದ ಜತೆ ಸೇರಿ ಸರಕಾರ ರಚಿಸುವ ಸಂದರ್ಭ ಬಂದರೆ ಬೇರೆ ಮಾತು. ಆಗ ದೆಹಲಿಯ ಆಯಕಟ್ಟಿನ ಜಾಗದಲ್ಲಿರುವ ಕಾಂಗ್ರೆಸ್‌ ನಾಯಕರು ತಮ್ಮ ಆಯಕಟ್ಟಿನ ಜಾಗಗಳಲ್ಲಿ ಮುಂದುವರಿಯುತ್ತಾರೆ.

ಅಂಥ ಸಂದರ್ಭ ಬರದೇ ಹೋದರೆ ಆಗ ಏನು ಮಾಡುವುದು? ಕಾಂಗ್ರೆಸ್‌ ಹೇಳಿ ಕೇಳಿ ಒಂದು ರಾಷ್ಟ್ರೀಯ ಪಕ್ಷ. ದೇಶದ ಬಹುತೇಕ ರಾಜ್ಯಗಳಲ್ಲಿ ಅದರ ಅಸ್ತಿತ್ವವಿದೆ. ಎಲ್ಲ ಕಡೆಯೂ ಅದಕ್ಕೆ ಅಧಿಕಾರವಿಲ್ಲ ಎಂಬುದು ಬೇರೆ ಮಾತು. ಆದರೆ ಅಧಿಕಾರ ಇರಲಿ, ಬಿಡಲಿ, ಪಕ್ಷವನ್ನಂತೂ ಮುನ್ನಡೆಸಲೇಬೇಕು.

ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲೂ ದೆಹಲಿಯಲ್ಲಿ ಕಾಂಗ್ರೆಸ್‌ ಅಧಿಕಾರದಲ್ಲಿರಲಿಲ್ಲ. ಹೀಗಾಗಿ ದೇಶದ ಬಹುತೇಕ ರಾಜ್ಯಗಳ ಚುನಾವಣೆಯಿಂದ ಹಿಡಿದು, ಪಕ್ಷವನ್ನು ಸಂಭಾಳಿಸುವ ತನಕ ಹಲವು ಜವಾಬ್ದಾರಿಗಳನ್ನು ಅವರು ಹೊರಬೇಕಾಯಿತು.

ಇದರ ಪರಿಣಾಮವಾಗಿಯೇ ಅವರು ಮಹಾರಾಷ್ಟ್ರದ ರಾಜ್ಯಪಾಲರಾದರು. ಕೇಂದ್ರ ವಿದೇಶಾಂಗ ಸಚಿವರಾದರು. ಆದರೆ ಮುಂದಿನ ದಿನಗಳಲ್ಲಿ ಇಂಥ‌ ಹೊಣೆಗಾರಿಕೆಯನ್ನು ಹೊರಲು ತಮ್ಮನ್ನು ಹೊರತುಪಡಿಸಿದರೆ ಯಾರು ಸಮರ್ಥರಿದ್ದಾರೆ ಎಂದು ದೇಶಪಾಂಡೆ ಯೋಚಿಸಿದ್ದರೆ ಅದು ಸಹಜವೇ.

ಇವತ್ತಿನ ಸ್ಥಿತಿಯಲ್ಲಿ ಪಕ್ಷಕ್ಕೆ ಟಾನಿಕ್‌ ನೀಡಲು ಅಂಥ ನಾಯಕರಿಂದ ಮಾತ್ರ ಸಾಧ್ಯ. ಹೀಗಾಗಿ ದೆಹಲಿಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರದಿದ್ದರೆ, ಅದರಲ್ಲೂ ತೃತೀಯ ರಂಗದ ಜತೆ ಸೇರಿ ಸರಕಾರ ರಚಿಸುವ ಪರಿಸ್ಥಿತಿ ಬರದಿದ್ದರೆ ತಮಗೆ ಅನುಕೂಲಕರ ಸಂದರ್ಭ ಒದಗಿ ಬರಬಹುದು ಎಂದು ಅವರು ಕಾದಿದ್ದಾರೆ.

ಇದೇ ರೀತಿ ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲು ಮುಖ್ಯ ಕಾರಣರಾದ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಅವರು ಕನಿಷ್ಠಪಕ್ಷ ಉಪಮುಖ್ಯಮಂತ್ರಿ ಆಗಲು ಯತ್ನಿಸಿದವರು. ಆದರೆ ಅದಕ್ಕೆ ಬೆಲೆ ಸಿಗಲಿಲ್ಲ. ಹೀಗಾಗಿ ಅವರೂ ಮುಖ್ಯಮಂತ್ರಿ ಆಗಲು ಯತ್ನಿಸಬಹುದು.

ಹೀಗಾಗಿ ಲೋಕಸಭಾ ಚುನಾವಣೆ ಆಡಳಿತಾರೂಢ ಕಾಂಗ್ರೆಸ್‌ ಪಕ್ಷಕ್ಕೆ ಬಹಳ ಮಹಣ್ತೀದ್ದು. ಆದ್ದರಿಂದ ರಾಜ್ಯ ಕಾಂಗ್ರೆಸ್‌ನ ಎಲ್ಲರ ಗಮನ ಫಲಿತಾಂಶದ ಮೇಲೇ ನೆಟ್ಟಿದೆ.

ಬಿಜೆಪಿಯ ಲೆಕ್ಕ

ಇನ್ನು ಬಿಜೆಪಿಯ ವಿಷಯಕ್ಕೆ ಬಂದರೆ ಇದು ಮಹಣ್ತೀದ ಚುನಾವಣೆ ಎಂಬುದರಲ್ಲಿ ಎರಡನೇ ಮಾತಿಲ್ಲ. ಯಾಕೆಂದರೆ, “ಇಂಡಿಯಾ ಶೈನಿಂಗ್‌’ ಎಂಬ ಹೆಸರಿನಲ್ಲಿ ಅದು ಚುನಾವಣೆ ಎದುರಿಸಿದೆ. ಅದಕ್ಕೆ ತಕ್ಕಂತೆ ರಾಜ್ಯದಲ್ಲಿ 12ಕ್ಕಿಂತ ಹೆಚ್ಚು ಸೀಟುಗಳನ್ನು ಗೆಲ್ಲಬೇಕಾದ ಅನಿವಾರ್ಯತೆ ಅದಕ್ಕಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅದು 19 ಸೀಟುಗಳನ್ನು ಗೆದ್ದುಕೊಂಡಿತ್ತು.

ಹೀಗಾಗಿ ಈ ಬಾರಿ 12 ಸೀಟುಗಳಿಗಿಂತ ಹೆಚ್ಚಿನ ಸೀಟುಗಳನ್ನು ಗೆಲ್ಲಬೇಕಾದ ಅನಿವಾರ್ಯತೆ ಅದರ ಕಣ್ಣ ಮುಂದಿದೆ. ಅನಂತಕುಮಾರ್‌, ಯಡಿಯೂರಪ್ಪ, ಸದಾನಂದಗೌಡ ಸೇರಿದಂತೆ ಹಲವರು ಮಂತ್ರಿ ಪದವಿ ಆಕಾಂಕ್ಷಿಗಳಿದ್ದಾರೆ.
ಹೀಗೆ ಕೇಂದ್ರ ಸಚಿವರಾಗಬೇಕು ಎಂದರೆ ಮೊದಲನೆಯದಾಗಿ ಎನ್‌ಡಿಎ ಅಧಿಕಾರಕ್ಕೆ ಬರಲು ನೆರವು ನೀಡಬೇಕು. ಅಂದರೆ, ಹೆಚ್ಚು ಹೆಚ್ಚು ಸೀಟುಗಳನ್ನು ಗೆಲ್ಲಲು ಆದ್ಯತೆ ಕೊಡಬೇಕು. ಇಲ್ಲದೇ ಹೋದರೆ ಪರಿಸ್ಥಿತಿ ಕಷ್ಟಕರವಾಗಬಹುದು. ಹಾಗೆಂಬ ಆತಂಕ ರಾಜ್ಯ ಬಿಜೆಪಿ ನಾಯಕರಲ್ಲಿದೆ. ಹೀಗಾಗಿ ಅವರೂ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ಹೆಚ್ಚಿನ ಗಮನ ನೆಟ್ಟಿದ್ದಾರೆ.

ಉಳಿದಂತೆ ಜೆಡಿಎಸ್‌ ವಿಷಯಕ್ಕೆ ಬಂದರೆ, ಈಗಲೂ ಅದಕ್ಕೆ ತೃತೀಯ ರಂಗ ಹೊರತುಪಡಿಸಿ ಬೇರೆಯವರು ಅಧಿಕಾರ ಹಿಡಿಯುವುದು ಕಷ್ಟ ಎಂಬ ಅಭಿಪ್ರಾಯವಿದೆ. ಮಾಜಿ ಪ್ರಧಾನಿ ದೇವೇಗೌಡರು ಒಂದಲ್ಲ, ಹತ್ತು ಕಡೆ ಈ ಮಾತುಗಳನ್ನು ಆಡಿ ತೋರಿಸಿದ್ದಾರೆ. ಹೀಗೆ ತೃತೀಯ ರಂಗ ಅಧಿಕಾರಕ್ಕೆ ಬಂದರೂ ರಾಜ್ಯದಲ್ಲಿ ಜೆಡಿಎಸ್‌ ಕನಿಷ್ಠಪಕ್ಷ ಐದು ಸೀಟುಗಳನ್ನು ಗೆಲ್ಲಬೇಕಲ್ಲ? ಹೀಗೆ ಗೆದ್ದು ಹೋಗಿ ಒಂದೊಂದೂ ಸೀಟೂ ಮುಖ್ಯ ಎಂದು ಹೇಳುವುದು ಸುಲಭ. ಆದರೆ ಗೆದ್ದು ಹೋಗದೆ ಏನೂ ಮಾಡಲು ಸಾಧ್ಯವಿಲ್ಲವಲ್ಲ?

ಹೀಗಾಗಿಯೇ ಅವರು ಕನಿಷ್ಠಪಕ್ಷ 12 ಲೋಕಸಭಾ ಕ್ಷೇತ್ರಗಳ ಮೇಲೆ ಕಣ್ಣು ನೆಟ್ಟು ಐದು ಸೀಟುಗಳನ್ನಾದರೂ ಗೆಲ್ಲುವ ಯತ್ನ ಮಾಡುತ್ತಿದ್ದಾರೆ. ಆದರೆ ಗೆಲ್ಲಬಲ್ಲೆವೇ ಎಂಬುದು ಅವರ ಆತಂಕ. ಹೀಗೆ ನೋಡುತ್ತಾ ಹೋದರೆ ಎಲ್ಲ ರಾಜಕೀಯ ಪಕ್ಷಗಳೂ ಧಾವಂತದಲ್ಲಿವೆ.

ಈ ಎಲ್ಲ ಧಾವಂತಗಳಿಗೂ ತೆರೆ ಬೀಳಲು ಸಾಕಷ್ಟು ಕಾಲಾವಕಾಶ ಬೇಕು.

ಎಲ್ಲ ರಾಜಕೀಯ ಪಕ್ಷಗಳಿಗೂ ಮಹಣ್ತೀದ್ದಾದ ಫಲಿತಾಂಶ ಬಂದ ಮೇಲೆ ಏನಾಗುತ್ತದೋ ಕಾದು ನೋಡಬೇಕು.

Leave a Reply

Your email address will not be published. Required fields are marked *

ನೀವು ನೋಡುತ್ತಿರುವುದು ಉಚಿತ ಪ್ರತಿ, ತರಂಗದ ಪೂರ್ಣಪ್ರತಿಯನ್ನು ಫ್ಲಿಪ್ ಬುಕ್ ರೂಪದಲ್ಲಿ ಪಡೆಯಲು ಚಂದಾದಾರರಾಗಿ.

Powered By Indic IME