ಕುತಂತ್ರಕ್ಕೆ ತಕ್ಕ ತಂತ್ರ

| June 3, 2014

Print Friendly

chinna-inದೊಡ್ಡನಾರಾಯಣನಂತೆಯೇ ನಡೆದೂ ನಡೆದೂ ಅಂತೂ ಇಂತೂ ಸಣ್ಣನಾರಾಯಣ ಆ ಸಾಹುಕಾರನ ಊರು ಸೇರಿ ಅವನ ಮನೆ ಮುಂದೆ ನಿಂತ್ಕೊಂಡು “”ಸಾವಾRರ್ರೆà” ಅಂತ ಕೂಗಿದ. ಹೊರಗೆ ಬಂದ ಸಾಹುಕಾರನಿಗೆ ನಮಸ್ಕಾರ ಮಾಡಿ, “”ಸಾವಾRರ್ರೆà, ನನ್ನ ಹೆಸರು ಸಣ್ಣನಾರಾಯಣ. ನೀವು ಬಹಳ ದಯಾವಂತರು ಅಂತ ಕೇಳಿದೀನಿ. ನಾನು ತುಂಬಾ ಬಡವ. ನಂಗೊಂದು ಕೆಲಸ ಕೊಡಿ” ಎಂದು ಅತೀ ವಿನಯದಿಂದ ಕೇಳಿದ ಸಣ್ಣನಾರಾಯಣ.

“”ಏನೇನು ಕೆಲ್ಸ ಮಾಡೋಕೆ ಬರುತ್ತೂ ನಿಂಗೆ?” ಎಂದು ಗತ್ತಿನಿಂದ ಪ್ರಶ್ನಿಸಿದ ಸಾಹುಕಾರ.

“”ಯಾವ ಕೆಲ್ಸ ಹೇಳಿದ್ರೂ ಮಾಡ್ತೀನಿ. ನಾನು ಬಹಳ ನಿಷ್ಠಾವಂತ ಕೆಲಸಗಾರ ಸಾಹುಕಾರ್ರೆ” ಅಂದ ಸಣ್ಣನಾರಾಯಣ.

“”ಸರಿ ಇವತ್ತಿನಿಂದಲೇ ಕೆಲಸಕ್ಕೆ ಸೇರೊR. ನೋಡು ಎರಡೂ ಹೊತ್ತು ನಿನಗೆ ಎಲೆತುಂಬಾ ಊಟ ಕೊಡ್ತೀನಿ. ತಿಂಗಳಿಗೆ ನೂರು ರೂಪಾಯಿ ಸಂಬಳಾನೂ ಕೊಡ್ತೀನಿ. ಆದ್ರೆ ನೀನು ಮಧ್ಯದಲ್ಲೇ ಕೆಲಸ ಬಿಟ್ರೆ ಐವತ್ತು ಛಡಿ ಏಟು ತಿನ್ನ ಬೇಕಾಗುತ್ತೆ. ಮೂಗು ಕೊಯ್ಯಿಸಿಕೊಳ್ಳಬೇಕಾಗುತ್ತೆ. ಅಷ್ಟೇ ಅಲ್ಲ ನಿನ್ನ ಸಂಬಳದ ಒಂದು ಪೈಸಾನೂ ಕೊಡೊಲ್ಲ. ನೆನಪಿರ್ಲಿ” ಹೇಳಿದ ಸಾಹುಕಾರ.

“”ಎಲೆ ತುಂಬಾ ಊಟಾನಾ? ಅಯ್ಯೋ ಬೇಕಾದಷ್ಟಾಯ್ತು ಬಿಡಿ. ತಿಂದು ಚೆಲ್ಲಾಡಬಹುದು” ಎಂದು ಸಣ್ಣನಾರಾಯಣ ಹೇಳಿದಾಗ,

“ತಿಂದು ಚೆಲ್ಲಾಡುತ್ತಾನಂತೆ. ಮಗನೇ ನನ್ನ ತಂತ್ರ ಗೊತ್ತಿಲೆª ಹೀಗೆ ಮಾತಾಡ್ತಿ. ಈ ಸಾಹುಕಾರ ಸಾಮಾನ್ಯನಲ್ಲ’ ಎಂದು ಮನಸ್ಸಿನಲ್ಲೇ ನಕ್ಕ ಕುತಂತ್ರಿ ಸಾಹುಕಾರ. “”ಅಷ್ಟೇ ಅಲ್ಲ ನಾನು ಬಹಳ ಧರ್ಮವಂತ ಕಣಯ್ಯ.
ನಾನೇನಾದ್ರೂ ನಿನ್ನನ್ನು ಕೆಲಸದಿಂದ ತೆಗೆದುಹಾಕಿದ್ರೆ ನಾನೂ ಈ ಶಿಕ್ಷೆ ಅನುಭವಿಸ್ತೀನಿ” ಎಂದು ಬಹಳ ನ್ಯಾಯವಂತನಂತೆ ಮಾತಾಡಿದ ಸಾಹುಕಾರ.

“”ಅಯ್ಯೋ! ಅಯ್ಯೋ! ಎಂತಹ ನ್ಯಾಯವಂತರು ನೀವು ಸಾಹುಕಾರ್ರೆ. ಪ್ರಪಂಚದಲ್ಲಿ ಯಾರೂ ನಿಮ್ಮಂತಹವರು ಸಿಗೋದಿಲ್ಲ. ದಿನಾ ನಿಮ್ಮ ಕಾಲಿಗೆ ನಮಸ್ಕಾರ ಮಾಡ್ಬೇಕು” ಎನ್ನುತ್ತಾ ಸಾಹುಕಾರನಿಗೆ ಉದ್ದಂಡ ನಮಸ್ಕಾರ ಮಾಡಿಬಿಟ್ಟ ಸಣ್ಣನಾರಾಯಣ.

“”ಆಯ್ತು, ಈಗ ಹೊಲಕ್ಕೆ ಹೋಗಿ ಮಧ್ಯಾಹ್ನದ ಊಟಕ್ಕೆ ಬಾ” ಎಂದು ಹೇಳಿದ ಸಾಹುಕಾರ ತನ್ನ ಮೀಸೆಯೊಳಗೇ ನಗುತ್ತಾ,

chinna-in-aಸಣ್ಣನಾರಾಯಣ ಮಧ್ಯಾಹ್ನದವರೆಗೂ ಚೆನ್ನಾಗಿ ದುಡಿದ. ಆಮೇಲೆ ಬಾಳೆಗಿಡಗಳ ಹತ್ತಿರ ಹೋಗಿ ಅತೀ ದೊಡ್ಡದಾಗಿದ್ದ ಒಂದು ಬಾಳೆಎಲೆಯನ್ನು ಪೂರ್ತಿಯಾಗಿ ಕೊಯ್ದುಕೊಂಡು ಬಂದು ಅದನ್ನು ಹಾಕಿಕೊಂಡು ಕೂತು, “”ಸಾವಾRರ್ರೆ, ಮಧ್ಯಾಹ್ನ ಆಯ್ತು. ಊಟಕ್ಕೆ ಬಂದಿದೀನಿ. ಬಡಿಸಿ” ಎಂದು ಕೂಗಿದ.

ತನ್ನ ಮನೆಯಿಂದ ಹೊರಗೆ ಬಂದ ಸಾಹುಕಾರ, “”ತೆಗೆದು ಹೊರಗೆ ಎಸಿಯೋ ಆ ಎಲೆನ” ಅಂದ.

“”ಯಾಕೆ ಸಾಹುಕಾರ್ರೆ!? ಊಟಕ್ಕೆ ಎಲೆ ತಂದಿದೀನಿ. ಅಷ್ಟೆ” ಎಂದು ವಿನಯದಿಂದಲೇ ನುಡಿದ ಸಣ್ಣನಾರಾಯಣ.
“”ಸರಿ. ಆದ್ರೆ ನಾನು ಬಾಳೆ ಎಲೆಲಿ ಊಟ ಕೊಡ್ತೀನಿ ಅಂತ ಹೇಳಿದೆ°àನಯ್ನಾ?” ಎಂದು ಕೇಳಿದ ಸಾಹುಕಾರ ಕುಹಕದಿಂದ ನಗುತ್ತಾ.

“”ಆದ್ರೆ ಸಾಹುಕಾರ್ರೆà, ಬಾಳೆಲೇಲಿ ಊಟ ಕೊಡಲ್ಲ ಅಂತ ಏನಾದ್ರೂ ಹೇಳಿದ್ರಾ? ಹೇಳಿ” ಎಂದು ತಿರುಗಿ ಕೇಳಿದ ಸಣ್ಣನಾರಾಯಣ.

“”ಆ! ಇಲ್ಲ” ಎಂದರು. ಈಗ ತಬ್ಬಿಬ್ಟಾಗುವ ಸರದಿ ಸಾಹುಕಾರರದು.

“”ಅಂದ್ಮೇಲೆ ಬೇರೆ ಮಾತೇ ಇಲ್ಲ. ಇದೂ ಎಲೆ ತಾನೇ? ಹೌದೋ ಅಲ್ಲವೋ ಹೇಳಿ” ಗಟ್ಟಿಯಾಗಿಯೇ ಕೇಳಿದ ಸಣ್ಣನಾರಾಯಣ.

“”ಹೌ… ಹೌ… ಹೌ… ದು. ಆದ್ರೆ ಇಷ್ಟು ದೊಡ್ಡ ಎಲೆ ತುಂಬಾ…” ತೊದಲುತ್ತಾ ಹೇಳಿದ ಸಾಹುಕಾರ.

“”ಇಷ್ಟು ದೊಡ್ಡ ಎಲೆ ತುಂಬಾ ಊಟ ಕೊಡೊಲ್ಲ ಅಂತೇನಾದ್ರೂ ನೀವು ಹೇಳಿದ್ರಾ? ಇಲ್ಲ ತಾನೆ? ಸರಿ ಮತ್ತೆ. ತನ್ನಿ. ಬಡಿಸಿ ಇದರ ತುಂಬಾ ಊಟಾನ. ಯಾಕೆ ಆಗೊಲ್ವಾ, “ಸಣ್ಣನಾರಾಯಣಾ, ನಿನಗೆ ಊಟ ಬಡಿಸೋಕ್ಕಾಗೊಲ್ಲ.
ಕೆಲಸ ಬೇಡ ಹೊರಟೊØàಗು’ ಅಂತ ಹೇಳಿಬಿಡಿ. ಆಗ ಗೊತ್ತಲ್ವಾ ಸಾಹುಕಾರ್ರೆà ತುಂಬಾ ನ್ಯಾಯವಂತರಾದ ನೀವೂ ಶಿಕ್ಷೆ ಅನುಭವಿಸಬೇಕು. ಐವತ್ತು ಛಡಿ ಏಟು. ಮೂಗು ಕೊಯ್ಯಿಸಿಕೊಳ್ಳೋದು. ಹತ್ತುಸಾವಿರ ರೂಪಾಯಿಗಳ ದಂಡ…” ರಾಗವಾಗಿ ಹೇಳಿದ ಸಣ್ಣನಾರಾಯಣ ಸಣ್ಣಗೆ ನಗುತ್ತಾ.

ಸಾಹುಕಾರ ಎಲ್ಲರಿಗೂ ಕಾಣುವಂತೆಯೇ ನಡುಗಿಬಿಟ್ಟ. ದೇವ್ರೇ, ಇದ್ಯಾವ ಅನಿಷ್ಟ ಪಿಂಡ ನನ್ನ ಬಳಿ ಬಂತಪ್ಪಾ$ ಎಂದು ಹೆದರಿದ. ಇರಲಿ ಒಪ್ಪೊತ್ತಿನ ಊಟ ಹಾಕಿ ಆಮೇಲೆ ನೋಡ್ಕೊಳ್ತೀನಿ ಅಂತ ಅಂದುಕೊಂಡು “”ಲೇ, ಊಟ ತಗೊಂಡು ಬಾ ಸಣ್ಣನಾರಾಯಣನಿಗೆ” ಎಂದು ಹೆಂಡತಿಯನ್ನು ಕೂಗಿದರು. ಹೆಂಡತಿ ಪಾಪ ಒಳ್ಳೆಯ ಸ್ವಭಾವದವಳು. ಚೆನ್ನಾಗಿಯೇ ಅನ್ನ ಹುಳಿ ಎಲ್ಲ ತಂದು ಬಡಿಸುತ್ತಿದ್ದರೆ ಅದನ್ನು ನೋಡಿ ಸಾಹುಕಾರನ ಹೊಟ್ಟೆಲಿ ತಳಮಳ.

ಆದ್ರೆ ಅಷ್ಟಕ್ಕೆ ಬಿಟ್ಟನೇ ನಮ್ಮ ಸಣ್ಣ ನಾರಾಯಣ!? ಸಾಹುಕಾರನ ಹೆಂಡತಿ ತಂದು ಬಡಿಸಿದ ಅನ್ನ ಹುಳಿಯನ್ನು ಎಲೆಯ ಒಂದು ಮೂಲೆಗೆ ಹಾಕಿಸಿಕೊಂಡು, “”ಅಯ್ಯೋ ಸಾಹುಕಾರ್ರೆ, ಧರ್ಮಾತ್ಮರಾದ ನೀವು ಎಲೆ ತುಂಬಾ ಊಟ ಕೊಡ್ಬೇಕೂಂತ ಇದ್ರೆ ನಿಮ್ಮ ಹೆಂಡತಿ ಎಷ್ಟು ಕಡಿಮೆ ಹಾಕಿದಾರೆ ನೋಡಿ. ಎಲೆ ಏನೇನೂ ತುಂಬಿಲ್ಲ. ಇನ್ನೂ ಖಾಲಿ ಖಾಲಿ ಇದೆ. ಒಳಗಿನಿಂದ ಚೆನ್ನಾಗಿ ಅನ್ನ ಹುಳಿ ತಂದು ಎಲೆ ತುಂಬಿಸೋಕೆ ಹೇಳಿ. ಸಾಲದೆ ಇದ್ರೆ ಪರವಾಗಿಲ್ಲ. ಮಾಡಿ ಬಡಿಸಲಿ. ಹುಷಾರ್‌! ಎಲೆ ಪೂರ್ತಿ ತುಂಬಬೇಕು. ಇಲ್ದಿದ್ರೇ…” ಅಂದ.

ಸಾಹುಕಾರ ಬೆಚ್ಚಿ, ಬೆವರಿ, ಒಳಗೇ ಹಲ್ಲುಕಡಿದ. “”ಆಯ್ತು. ನೋಡೇ, ಎಲೆ ತುಂಬೋ ಅಷ್ಟು ಊಟ ಬಡಿಸು ಇವನಿಗೆ” ಎಂದರು.

“”ಅಷ್ಟೊಂದು ಎಲ್ಲಿದೆ? ನಮ್ಮಿಬ್ಬರಿಗೆ ಆಗೋ ಅಷ್ಟೇ ತಾನೆ ಯಾವಾಗ್ಲೂ ಮಾಡೋದು” ಎಂದು ಹೆಂಡತಿ ಹೇಳಿದಾಗ ಸಾಹುಕಾರ, “”ಬಾಯಿಮುಚೊRಂಡು ಮಾಡೇ” ಎಂದು ಅವಳ ಮೇಲೇ ರೇಗಿಬಿಟ್ಟ, “ಅತ್ತೆಯ ಮೇಲಿನ ಸಿಟ್ಟು ಕೊತ್ತಿಯ ಮೇಲೆ’ ಅನ್ನೋ ಗಾದೆ ಕೇಳಿದೀರಲ್ವಾ.

“”ಸ್ವಲ್ಪ$ ಬೇಗ ಮಾಡಿ. ಹಾಗಂತ ರುಚಿಯಾಗಿರಬೇಕು” ಎಂದೂ ಒಗ್ಗರಣೆ ಹಾಕಿದ ಸಣ್ಣನಾರಾಯಣ.

(ಮುಂದಿನ ವಾರ – ಸಾಹುಕಾರನಿಗೆ ತಿರುಗೇಟು)

Leave a Reply

Your email address will not be published. Required fields are marked *

ನೀವು ನೋಡುತ್ತಿರುವುದು ಉಚಿತ ಪ್ರತಿ, ತರಂಗದ ಪೂರ್ಣಪ್ರತಿಯನ್ನು ಫ್ಲಿಪ್ ಬುಕ್ ರೂಪದಲ್ಲಿ ಪಡೆಯಲು ಚಂದಾದಾರರಾಗಿ.

Powered By Indic IME